ಜೊತೆಗಾತಿ
- ಅವಿನಾಶ್ ಲಕ್ಷ್ಮಯ್ಯ

- Dec 10, 2024
- 1 min read
ಎಲ್ಲ ಹೇಳಿಬಿಡುವ
ಆತುರವೇಕೆ ಗೆಳತಿ,
ಬಂಗಾರದ ಲಾಟೀನ ಹಿಡಿದು
ಚಂದಿರನೇ ಕಾವಲಿರುವಾಗ..
ಮುದ್ದು ಮೌನಕೆ ಜೋಡಿ
ಮುಸ್ಸಂಜೆಯಿದೆ ನಮಗೆ..
ಕಣ್ಣಲ್ಲಿ ಕಣ್ಣಿಟ್ಟು
ಕೂರುವ ಸಾಕು,
ನಾ ಕವಿ,
ನೀ ಕಾವ್ಯವಾಗಿರುವಾಗ..
ಅಲ್ಲೊಂದು
ಗುಲಾಬಿಯ ತೋಟ,
ನಿನ್ನ ಗೆಜ್ಜೆ ಸಪ್ಪಳ ಕೇಳಿ
ಎಚ್ಚರಗೊಂಡಂತಿದೆ..
ಮಡಿಲಿನಲಿ ಓಲೈಸಿ
ಕನಸೊಂದ ನೀಡುವ ಬಾ..
ನಮ್ಮಿಬ್ಬರ ಒಲವನ್ನೆ ಭ್ರಮಿಸಿ
ಅರಳಲಿ ತಾನು,
ದುಂಬಿಗದು ಮಧುವಿನಲಿ
ತಿಳಿಯಲಿ ಬಾ..
ನಿನಗೆಂದೇ, ಬರೆದ ಹಾಡೊಂದಿದೆ,
ನಿನ್ನ ಜೊತೆಗೇ ನಾ, ಹಾಡಬೇಕಿದೆ..
ಗುನುಗುವೆಯ ಶೃತಿಮಾಡಿ
ನೀ ಮೊದಲ ಸಾಲು,
ನಗು ಚೆಲ್ಲೊ ನಾಚಿಕೆಯು
ಅದು ನನ್ನ ಪಾಲು..
ಮೆಚ್ಚುಗೆಗೊಂದು
ಪೂರ್ಣ ಅಪ್ಪುಗೆಯು ಬೇಕು..
ಪಲ್ಲವಿಗೆ ಸೋತರೆ ನೀನು
ಈ ಸಂಜೆಗದು ಸಾಕು..!

Comments