ಜುಮುಕಿ
- ಅವಿನಾಶ್ ಲಕ್ಷ್ಮಯ್ಯ

- Oct 1
- 1 min read
ಹಿಂಬಾಲಿಸಿ ನೆಡೆದಿದೆ ಮನಸು
ಕರೆವ ಆ ಜುಮುಕಿಯ ಹಿಂದೆ..
ಬರಿಯೆ ಅಂದಕೆ ತೊಟ್ಟಿರುವೆಯ ಅದನು
ನನಗದೇ ಶಂಕೆ..
ನಿನ್ನೆಲ್ಲಾ ಮುಗುಳುನಗೆಯ
ವಿವರಿಸಿ,
ವರ್ಣಿಸುವ ಕೆಲಸವಿದೆಯೇನೊ..
ನೀ ಹೇಳ ಬಯಸಿದನಲ್ಲದೇ
ಹೆಚ್ಚೇನೋ ಹೇಳುತಿದೆ ಇನ್ನು..
ಧುಮುಕಿ ಕುಣಿವಾ ಲಯಕೆ
ಶೃತಿ ಮಾಡಲೇನೆ,
ಈ ಬಡಪಾಯಿ ಹೃದಯವನು..
ಚೂರು ಹಳಿ ತಪ್ಪಿದರೆ, ಕ್ಷಮಿಸು
ತಪ್ಪು ನನ್ನದಲ್ಲ,
ಮುದ್ದಾಗಿ ಕರೆದ ಜುಮುಕಿಯದೇ ಇನ್ನು..

Comments