ಅವಳ ಒಲವೇ ಹಾಗೆ…
- ಅವಿನಾಶ್ ಲಕ್ಷ್ಮಯ್ಯ

- Aug 23
- 1 min read
ಅವಳ ಒಲವೇ ಹಾಗೆ…
ನಾಜೂಕಾಗಿ ಪೋಣಿಸಿದ
ಕಾವ್ಯದ ಹಾಗೆ..
ಹೇಳುವುದೆಲ್ಲವ ಬಚ್ಚಿಟ್ಟ
ಮೌನದ ಹಾಗೆ..
ಆತುರದ ಕಂಗಳ
ಹುಡುಕಾಟದ ಹಾಗೆ..
ಬೆಚ್ಚಿ ನಡುಗುವ
ಬಿಸಿಯುಸಿರ ಹಾಗೆ..
ಲಯತಪ್ಪಿ ಮಿಡಿವ
ಹೃದಯದ ಹಾಗೆ..
ಸ್ಪರ್ಷಕೆ ಹಾತೊರೆವ
ಕಿರುಬೆರಳ ಹಾಗೆ..
ಹೆಜ್ಜೆ ತಪ್ಪಿದ ಗೆಜ್ಜೆ
ಘಲ್ಲೆನ್ನುವ ಹಾಗೆ..
ಬೆನ್ನ ತೋರಿ, ನಾಚುವ
ಮುಗಿಲಿನ ಹಾಗೆ..
ಬಯಕೆ ಹಾತೊರೆವ
ಅಪ್ಪುಗೆಯ ಹಾಗೆ..
ಘಾಸಿ ಮಾಡದ
ಮೊದಲ ಮುತ್ತಿನ ಹಾಗೆ..
ಅವಳ ಒಲವೇ ಹಾಗೆ

Comments