ಸೂತ್ರಧಾರ..
- ಅವಿನಾಶ್ ಲಕ್ಷ್ಮಯ್ಯ

- Oct 27, 2024
- 1 min read
ಘಳಿಗೆ ಒಂದಿತ್ತು..
ಮನಸು ತುಂಬಿತ್ತು..
ಇನ್ನೇನು ಬೇಕಿಲ್ಲ,
ಸಾಕು ಎನಿಸಿತ್ತು..
ಅನಿಸಿಕೆಯ ಸಂಖ್ಯೆಗಳು
ನಮ್ಮವೇ ಆದರು,
ಸಕಲ ಸೂತ್ರಗಳು
ನಿನ್ನ ಕೈಯಲ್ಲಲ್ಲವೆ..!
ಕೂಡಿಸುವೆ ಎಂದಾಗಲೇ
ಕಳೆದು ಬಿಡುವೆ..
ಗುಣಿಸಲು ಹೋದಷ್ಟು
ಬಾಗಿಸಿ ಬಡಿವೆ..!
ಏನಾದರೇನಂತೆ,
ಕೃತಜ್ಞತೆಯ ಶರಣು
ಒಪ್ಪುವುದೆ ನಿನಗೆ?
ಘನತೆ ಮೆರೆಯುವೆ ನೀನು
ಕೊರತೆಯಾ ಕರೆಗೆ..!

Comments