ರತನ್ ನೇವಲ್ ಟಾಟಾ
- ಅವಿನಾಶ್ ಲಕ್ಷ್ಮಯ್ಯ

- Oct 27, 2024
- 1 min read
Ratan Tata - Visionary, a True Leader and a Humanitarian

ಕನಸಿರಬೇಕು ನಿಮ್ಮಂತೆ,
ಸಾಕಾರಗೊಳಿಸಲು
ಛಲವಿರಬೇಕು ನಿಮ್ಮಂತೆ..
ಮುನ್ನೆಡೆಸಬೇಕು ನಿಮ್ಮಂತೆ,
ಪ್ರಗತಿಯ ಹಾದಿಯೇ,
ಅಚ್ಚುಳಿಯುವಂತೆ..
ಜ್ಞಾನವಿರಬೇಕು ನಿಮ್ಮಂತೆ,
ಗುಣ ವಿವೇಕವದು,
ಪುಟಕಿಟ್ಟ ಬಂಗಾರದಂತೆ..
ಆಚಾರವಿರಬೇಕು ನಿಮ್ಮಂತೆ
ವಿಚಾರದಲೆ,
ವಿಶ್ವವನೇ ಗೆಲ್ಲುವಂತೆ..
ನಗುವಿರಬೇಕು ನಿಮ್ಮಂತೆ,
ಸರಳತೆಯ,
ಸುಲಭ ದಾರಿ ತೋರುವಂತೆ..
ದಯೆಯಿರಬೇಕು ನಿಮ್ಮಂತೆ,
ಪರೋಪಕಾರವೇ,
ಎಲೆ ಮರೆ ಕಾಯಿದ್ದಂತೆ..
ಬೇರೂರಬೇಕು ನಿಮ್ಮಂತೆ,
ಮುಗಿಲೆತ್ತರಕೆ ಬೆಳೆದು
ಸಲಹುವ ಹೆಮ್ಮರದಂತೆ..
ಬದುಕಬೇಕು ನಿಮ್ಮಂತೆ,
ಸ್ಪೂರ್ತಿಯಾಗಿ,
ಶ್ರೇಷ್ಟ ಮಾನವತಾವಾದಿಯಂತೆ..!
-ಅವಿ

Comments