ರಾಜಕೀಯ
- ಅವಿನಾಶ್ ಲಕ್ಷ್ಮಯ್ಯ

- Oct 20, 2024
- 1 min read
ಕುರುಡು ರಾಜ್ಯಕೆ
ರಾಜನ ಕೊಟ್ಟೆ..
ಸತ್ಯ ನುಂಗುವ
ಜಗದಲಿ ಬಿಟ್ಟೆ..
ಬರಿಯ ಹೊಸಿಲಿಗೆ
ಕೀಲಿಯ ಕೊಟ್ಟೆ..
ಜೇವ ಕಾಯಲು
ಯಮನನೆ ಬಿಟ್ಟೆ..
ಅದಿಕವೆನಿಸುವ
ಅದಿಕಾರವ ಕೊಟ್ಟೆ..
ಎಲುಬ ಎಣಿಸಲು
ಮಂತ್ರಿಯ ಬಿಟ್ಟೆ..
ಪಾಪ ಪುಣ್ಯವ
ನಮ್ಮಲಿ ಕೊಟ್ಟೆ..
ಗೋರಿ ಕಟ್ಟಲು
ಕುತಂತ್ರಕೆ ಬಿಟ್ಟೆ..
ಸೄಷ್ಟಿಕರ್ತ ನೀ
ನಮಗೆಲ್ಲವ ಕೊಟ್ಟೆ..
ನಮ್ಮ ಕಾಯಲು
ಇವರನ್ಯಕೆ ಬಿಟ್ಟೆ..!!

Comments