ರಂಗಮಂಚ
- ಅವಿನಾಶ್ ಲಕ್ಷ್ಮಯ್ಯ

- Oct 30, 2024
- 1 min read
ಗುರುತನೆ ಮರೆಸುವೆ
ಬಣ್ಣವ ಬಳಿದು
ನಾಚಿಕೆ ಆಚೆಗೆ
ದೂಡುವೆ ಎಳೆದು..
ಬುರುಡೆಯು ಕಾವಿನ
ಕೆಂಡದ ಹಟ್ಟಿ
ಕುಣಿಯುವೆ ನೋಡ್ವೆಯ
ರಂಗವ ಕಟ್ಟಿ..
ತಂಗಳಿಗೊಂದು
ರುಚಿಯಿದೆ ನೋಡು
ಉಪ್ಪಿನ ಕಾಯಿಯೆ
ಬದುಕಿನ ಜಾಡು..
ಮನಸಿನ ಹೆಂಡದ
ಅಂಗಡಿ ಗೋಳು
ಅಮಲಿನ ಅಲೆಯಲೆ
ನೆಡೆದಿದೆ ಬಾಳು..
ತಿರುಕನ ಜಗುಲಿಯೆ
ಜಗವಿದು ಒಂದು
ಕನಸಿಗೆ ಯಾರಲು
ಕೊರತೆ ಇರದೆಂದು..
ವೇಷ ಕಳಚಿಯು
ನಿಲ್ಲದ ಆಟವಿದೊಂದು
ನೆಡೆವುದೀ ನಾಟಕ
ಪಾತ್ರ ನನದೊಂದು..

Comments