ಯಾರೆ ನೀನು..?
- ಅವಿನಾಶ್ ಲಕ್ಷ್ಮಯ್ಯ

- Oct 20, 2024
- 1 min read
Updated: Oct 27, 2024

ಯಾರೆ ನೀನು..?
ಅರಳೊ ಹೂವಿನ
ಮಿಡಿತ ನೀನು..
ಮೊದಲ ಭೇಟಿಯ
ತುಡಿತ ನೀನು..
ನೆನಪಿನಾಚಿನ
ಸೆಳೆತ ನೀನು..
ನೆನ್ನೆ ನಾಳೆಗಳ
ಪುಟವು ನೀನು..
ದೂರದಲ್ಲಿನ
ಸನಿಹ ನೀನು..
ಸಮಯ ಸವೆಸುವ
ಘಳಿಗೆ ನೀನು..
ಹಗಲುಗಣ್ಣಿನ
ಕನಸು ನೀನು..
ಪ್ರಜ್ಞೆ ಕಸಿಯುವ
ಇರುಳು ನೀನು..
ಬೆಳದಿಂಗಳಲ್ಲಿನ
ನೆರಳು ನೀನು..
ನೆನಪೇ ಬಾರದ
ಹಾಡು ನೀನು..
ಮೌನದೊಳಗಿನ
ಮಾತು ನೀನು..
ಸುಡುವ ಭಾವನೆಗೆ
ಇಬ್ಬನಿಯು ನೀನು..!
ಹೇಳು, ಯಾರೆ ನೀನು..!?

Comments