ಯಾರು ದೋಷಿ..
- ಅವಿನಾಶ್ ಲಕ್ಷ್ಮಯ್ಯ

- Oct 27, 2024
- 1 min read
ಕಲ್ಲಿಗೊಂದು
ಹೂ ಉದುರಿತ್ತು..
ಗಾಳಿಗೊಂದು
ಹೂ ಉದುರಿತ್ತು..
ಕಲ್ಲಿನ ಮೇಲೆ, ಎಲ್ಲರ
ವೈಶಮ್ಯ ಸುರಿದಿತ್ತು..
ಹಗೆಯಾಗಲಿ, ಕ್ರೊದವಾಗಲಿ
ಇರಲಿಲ್ಲ ಕಲ್ಲಿಗೆ,
ಬರಿದೆ ಕಾರಣವಾಗಿತ್ತು
ಇನ್ನಾರದೊ ಗುರಿಗೆ..!
ಸುಕಾಸುಮ್ಮನೆ ದೋಷಿಯಾಗಿತ್ತು
ತನ್ನದಲ್ಲದ ಕ್ರಿಯೆಗೆ..!
ತಪ್ಪಿನ ಕುರುಹು ಇಲ್ಲ,
ಪಾಪದ ಮಸಿಯು
ಅಂಟಲೇ ಇಲ್ಲ,
ಸದ್ದಿಲ್ಲದೇ ಬೀಸಿ,
ಕೊಂದ ಗಾಳಿಗೆ..!

Comments