ಕತ್ತಲೆ
- ಅವಿನಾಶ್ ಲಕ್ಷ್ಮಯ್ಯ

- Oct 29, 2024
- 1 min read
ಕತ್ತಲೆಯು ನಿನ್ನಾಟವೊ,
ಅದು, ನೀ ಬಳಿದ
ಬರಿಯ ಬಣ್ಣವೊ?
ನಗುವಂತೆ ಮಿಂಚಿ
ಮರೆಯಾಗೊ, ಬೆಳಕಿನಾಟವೊ?
ಭ್ರಮಿಸಿ ಕಾಣೊ ಕನಸೊ,
ನನ್ನೆ, ನಾ ಹುಡುಕಲು
ನೀ ಚಿತ್ರಿಸಿದ ಸೊಗಸೊ?
ಕುರುಡು ಕಂಗಳ ಬದುಕೊ
ಆತ್ಮ ಸ್ಥೈರ್ಯದ ಬೆಳಕೊ?
ಇರುಳು ತೋರಿದ ಸುಳಿಯೊ
ಎಟುಕಲಾರದ ಸತ್ಯವೊ..!
ಮಂದ ಬುದ್ದಿಗೆ, ಕಗ್ಗತ್ತಲೊ
ಅರಿತರೆ, ಆಳದ ಕಡಲೊ..

Comments