ಸಾಕೆನ್ನಬಹುದಿತ್ತು..
- ಅವಿನಾಶ್ ಲಕ್ಷ್ಮಯ್ಯ

- Nov 19, 2024
- 1 min read
ಸಾಕೆನ್ನಬಹುದಿತ್ತು,
ಸಹಕರಿಸಿಬಿಟ್ಟೆ..
ಸೋಲಬಹುದಿತ್ತು,
ಸೆಡ್ಡು ಹೊಡೆದುಬಿಟ್ಟೆ..
ತುಸು ಯೋಚಿಸಬಹುದಿತ್ತು,
ನಿರ್ಧರಿಸಿಬಿಟ್ಟೆ..
ಅರಿಯಬಹುದಿತ್ತು,
ಆಲಸ್ಯ ಮಾಡಿಬಿಟ್ಟೆ..
ಘಳಿಗೆ ತಡೆಯಬಹುದಿತ್ತು,
ಗತವ ಮರೆತುಬಿಟ್ಟಿ..
ಪ್ರಶ್ನಿಸಬಹುದಿತ್ತು,
ಪೂರ್ಣ ನಂಬಿಬಿಟ್ಟೆ..
ತಿಳುವಳಿಕೆ,
ತಿಳಿಯಾಗುವುದರೊಳಗೆ..
ನಾ ಮುಳುಗಿ, ತೇಲಿಯೂ ಬಿಟ್ಟೆ..!

Comments