ನಿವೇದನೆ
- ಅವಿನಾಶ್ ಲಕ್ಷ್ಮಯ್ಯ

- Jan 26
- 1 min read
ಖಾಲಿ ಕುರ್ಚಿಯ
ಮೇಲೊಂದು,
ತುಂಬು ಹನಿಗಳ
ಹಾಳೆಯನಿಟ್ಟಿರುವೆ..
ಖಾಸಗಿ ಮಾತುಗಳ ಅಲ್ಲಿ
ನಾಜೂಕಾಗಿ ಜೋಡಿಸಿರುವೆ..
ಆತುರದ ತಂಗಾಳಿ,
ಕದ್ದು ಓದುವ ಮೊದಲೇ,
ಬೆರಳಾಡಿಸು ಒಮ್ಮೆ ಗೆಳತಿ..
ಕಣ್ಣ ಹೊಳಪಲಿ ಸಿಕ್ಕಿ
ಹನಿಯು ಮುತ್ತಾಗಲಿ ತಾನು,
ಆರಿಸಿ, ಹೆಕ್ಕಿ ತೆಗೆದಾ ಮಾತು
ನಿನ್ನಾವರಿಸಲಿ ಇನ್ನೂ..
ಸಮ್ಮತಿಸುವ ಮುನ್ನ
ನಾಚಿಬಿಡು, ಅಂದಿನ ಹಾಗೆ..
ಕರೆಯುವ ಮೊದಲೇ ಸೇರುವೆ,
ಕನಸಾಗಿ,
ಕಡಲ ಕಂಗಳ ಒಳಗೆ..!

Comments