ಮರೆವು
- ಅವಿನಾಶ್ ಲಕ್ಷ್ಮಯ್ಯ

- Nov 24, 2024
- 1 min read
ನಿನ್ನ ಸ್ಮರಿಸುವಷ್ಟು, ಜ್ಞಾಪಕ
ಜ್ಞಾನವ ಕೊಟ್ಟೆ..
ಬೇಡುವ ಮೊದಲೇ, ಮರೆವಿನ
ವರವ ನೀನಿತ್ತೆ..
ನಾನಾದರೂ ಸಾಮಾನ್ಯ
ನೀ, ದಿವ್ಯ ಚೇತನವಲ್ಲವೇ..
ಮರೆತರು ನಾ, ನನ್ನಂತರಾಳವ
ನೀ ಅರಿಯಲಿಲ್ಲವೆ..?
ಕಡೆಗಣಿಸುವಂತ,
ಹಟವು ನಿನಗೇತಕೆ..
ದಯೆ ಮರೆತರೆ ನೀ,
ಸ್ಮರಿಸಲಿ, ಇನ್ನಾವ ಸಾರ್ಥಕಕ್ಕೆ..!
ನಾಳೆ ಇಂದಿನ ಹಾಗಿಲ್ಲ..
ನಿನ್ನೆ ಮಾಸುವುದೇ ಇಲ್ಲಾ..
ಮರೆವಿನ ವರ,
ಒಂದಿಲ್ಲವಾದರೆ..
ನೆನಪುಗಳ, ಹೊರುವ ಶಕ್ತಿ
ನಿನ್ನಲ್ಲಿಯೂ ಇಲ್ಲಾ...

Comments