ಖಾಸಗಿ ಇರುಳು
- ಅವಿನಾಶ್ ಲಕ್ಷ್ಮಯ್ಯ

- May 1
- 1 min read
ಯಾರಾದರೂ ಇಂದು
ಚಂದಿರನ ಅಪಹರಿಸಬಾರದೆ..
ಬೆಳದಿಂಗಳಂತೆ,
ತೋಳ ಸೇರಿದ ನಲ್ಲೆ..
ತಿರುಗಿ ಅವನೊಟ್ಟಿಗೆ
ಹೊರಡುವ ಒಪ್ಪಂದವಾಗಿದೆ..!
ಗಡುವು ನೀಡುವ ಉದಾರಿಯಲ್ಲ,
ಅಸೂಯೆ ಅವನಲ್ಲೂ..
ಇರಾದೆಯೊಂದೇ,
ತುಸು ಹೆಚ್ಚು ಹೊತ್ತು, ಒಟ್ಟಿಗಿರಲು..
ಆಡದೇ ಉಳಿದ ಮಾತುಗಳ,
ಕೇಳಬೇಕಿದೆ ಅವಳೆ
ಎದೆಗೆ ಕಿವಿಕೊಟ್ಟು..
ಅವಳಿಗಾಗೆ ಕೂಡಿಟ್ಟ
ಭಾವನೆಗಳಿಗೆ,
ಸಿಹಿ ಸಂಭಾವನೆಯ ಕೊಟ್ಟು..!
ಮಿಡಿವ ಮುತ್ತುಗಳ ಹೆಕ್ಕಿ
ಕಥೆಯೊಂದ, ಹೆಣೆಯುವ ಸುಮ್ಮನೆ..
ಈ ಖಾಸಗಿ ಇರುಳು
ಎಲ್ಲರಿಂದ, ಬಚ್ಚಿಡುವ ಕಲ್ಪನೆ..

Comments