ಕನ್ನಡಿಗ
- ಅವಿನಾಶ್ ಲಕ್ಷ್ಮಯ್ಯ

- Feb 1
- 1 min read
ಹೀರಬೇಕಿದೆ ಮತ್ತೆ
ನಿನ್ನ ತನವ, ಈ ಮಣ್ಣಿಂದ
ಓ ಕನ್ನಡಿಗ..
ಸ್ವಾಭಿಮಾನ ಸಂಸ್ಕೃತಿಯ
ಪೌಷ್ಟಿಕಾಂಶ,
ಕುಂದುತಿದೆ ಈಗ..
ಸೌಜನ್ಯ ಸಹಬಾಳ್ವೆ
ವ್ಯಕ್ತತ್ವದಲ್ಲಿರಲಿ..
ಕೆಣಕಿದರೆ
ಹೆಡೆಮುರಿ ಕಟ್ಟುವ,
ಜಾಹಿರಾತಿರಲಿ..
ಇರಲಿ ಮಿಕ್ಕವರೆಲ್ಲಾ
ಗೊಬ್ಬರದ ಹಾಗೆ..
ಬೆಳಸು ನೀ ಕನ್ನಡವ,
ಹೆಮ್ಮರವಾಗೆ..!

Comments