ಹಟಮಾರಿ
- ಅವಿನಾಶ್ ಲಕ್ಷ್ಮಯ್ಯ

- Dec 1, 2024
- 1 min read
ಓಡುವಾಗ ದಣಿದೆ,
ನೆಡೆಯುವಂತಾದೆ..
ನೆಡೆಯುವಾಗ ಎಡವಿ,
ಕುಂಟುವಂತಾದೆ..
ಕುಂಟುವಾಗ ಜಾರಿ,
ತೆವಳುವಂತಾದೆ..
ತೆವಳುವಾಗ ಸವೆದು,
ನೆಲ ಕಚ್ಚಿಹೋದೆ..!
ನೀ, ಬರೆದಂತೆ ನೆಡೆದರೆ
ಮೆಚ್ಚದವನಾದೆ..
ಎದುರಿಸಲು ನಿಂತರೆ,
ಅಹಂಕಾರಿಯಾದೆ..
ತೋಚದಯ್ಯ, ನಿನ್ನಾಟಕೆ
ಹೊಂದಿಕೊಳ್ಳುವ ದಾರಿ..
ನಿನ್ನರಿಯುವ ಇರಾದೆಯಿದೆೆ,
ನೀನೋ, ನಿಗೂಢ ಹಟಮಾರಿ..!

Comments