ಅಲೆಮಾರಿಯ ಊರು..
- ಅವಿನಾಶ್ ಲಕ್ಷ್ಮಯ್ಯ

- Apr 26
- 1 min read
ಅದೆಲ್ಲಿಯೋ ಒಂದಿದೆ
ಅಲೆಮಾರಿಗೆ ಊರು…
ನೆನ್ನೆಗಳು ಹಿಂಬಾಲಿಸದ,
ನಾಳೆಗಳು ಭಾರವೆನಿಸದ,
ಇಂದು ಮಾತ್ರವೇ ತಬ್ಬುವ
ನೆಮ್ಮದಿಯ ಮಡಿಲು..
ಅಪರಿಚಿತನ
ಆಪ್ತನನ್ನಾಗಿಸುವ,
ಹೆಗಲ ಹಗುರಾಗಿಸುವ,
ಸಮಯದ
ಅಸ್ತಿತ್ವ ಮರೆಸುವ,
ಅದೆಲ್ಲಿಯೋ ಒಂದಿದೆ
ಅಲೆಮಾರಿಗೆ ಊರು

Comments