ಕಲೆ..
- ಅವಿನಾಶ್ ಲಕ್ಷ್ಮಯ್ಯ

- Oct 27, 2024
- 1 min read
ನೆಂದ ಕಾಗದದ ಹಾಗೆ,
ಮುದ್ದೆಯಾಗಿದೆ ಮನಸು..
ಕಾಗದವ ಹರಿವಿಕ್ಕಿ
ಓದಬೇಕಿದೆಯಲ್ಲ..!
ಶಾಯಿಯೆಲ್ಲಾ ಕರಗಿ
ಕಲಸಿ ಹೋಗಿವೆ ನೆನಪು,
ಮಂಜು ಕವಿದ ಕಂಗಳಿಗೆ
ನಿಶ್ಯಬ್ದವೇ ಉಳಿದದ್ದೆಲ್ಲ..!
ಹೊಸತೇನೆ ತೋಚಿದರು
ಅಕ್ಷರಕೆ ಬಾರದದು,
ಮೊದಲಿನಂತೆ,
ಅಷ್ಟು ಒಪ್ಪವಾಗಿಲ್ಲ..!
ನೆರಳಿನ ಚಹರೆಗಳ
ತಿದ್ದಿಬಿಡಬಹುದು,
ಹಳೆಯದೇ ತಿದ್ದಲು, ಇನ್ನು
ಸಹನೆ ಉಳಿದಿಲ್ಲ..!
ಅಳಿಸಲಾಗದ ಕಲೆಯಂತು
ಉಳಿಯಿತಲ್ಲ..

Comments