ಋಣ
- ಅವಿನಾಶ್ ಲಕ್ಷ್ಮಯ್ಯ

- Oct 20, 2024
- 1 min read
ಕಂಪಿಸುತಿದೆ ಮನ
ಕುಲುಮೆಯಲಿ ಬೆಂದ
ಕಬ್ಬಿಣದಂತೆ..,
ಬಡಿದು ಕತ್ತಿಯನೇನೊ
ಮಾಡಿರುವೆ,
ಇರಿಯುತಿದೆ ನನ್ನನೆ
ಜೀವ ತೆಗೆಯದಂತೆ..!
ವಿರುದ್ದವೊ, ಇದು ಯುದ್ದವೊ?
ಸೋತರೂ ಸತ್ತಂತೆ
ಗೆದ್ದರೂ ಸತ್ತಂತೆ..
ಉಸಿರಿನ ಅಣು ಅಣುವಿದೆ
ಈ ಬಾಜಿಯಲ್ಲಿ,
ಋಣದ ಖಾತೆ ಮುಗಿದಂತಿದೆ
ರಾಜಿಯಿನ್ನೆಲ್ಲಿ..!

Comments